ಬಸವಕಲ್ಯಾಣ; 10 ಕೋಟಿ ಆರೋಪಕ್ಕೆ ಎಚ್‌ಡಿಕೆ ಟ್ವೀಟ್ ಬಾಣ!

Contacts:

Bidar

oi-Gururaj S

|

Updated: Wednesday, March 31, 2021, 14:18 [IST]

ಬೀದರ್, ಮಾರ್ಚ್ 31; ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಉಪ ಚುನಾವಣೆಗೆ ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಜೆಡಿಎಸ್ ಪಕ್ಷ ಯಸ್ರಬ್ ಅಲಿ ಖಾದ್ರಿ ಎಂಬ ಮುಸ್ಲಿಂ ಅಭ್ಯರ್ಥಿಯನ್ನು ಬಸವಕಲ್ಯಾಣದಲ್ಲಿ ಕಣಕ್ಕಿಳಿಸಿದೆ. ಏಪ್ರಿಲ್ 17ರಂದು ಉಪ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಬಸವಕಲ್ಯಾಣ ಉಪ ಚುನಾವಣೆ; ಬಿಜೆಪಿಗೆ ಬಂಡಾಯದ ಬಿಸಿ?

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, “ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ಬಳಿ 10 ಕೋಟಿ ರೂ. ಪಡೆದು ಬಸವಕಲ್ಯಾಣದಲ್ಲಿ ಅಭ್ಯರ್ಥಿ ಹಾಕಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಸವಕಲ್ಯಾಣ ಉಪ ಚುನಾವಣೆ; ಒಳ ಒಪ್ಪಂದ ರಹಸ್ಯ ಬಯಲು!

ಮಾರ್ಚ್ 26ರಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿ, “ಜೆಡಿಎಸ್ ನವರು ಬಿಜೆಪಿ ಜೊತೆ ಒಳ‌ಒಪ್ಪಂದ ಮಾಡಿಕೊಂಡು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ನಮ್ಮ ಮತಗಳನ್ನು ವಿಭಜಿಸುವ ಹುನ್ನಾರ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.

ಬಸವಕಲ್ಯಾಣ ಉಪ ಚುನಾವಣೆ; ಯಡಿಯೂರಪ್ಪ ಸ್ಪಷ್ಟನೆ

ಎಚ್. ಡಿ. ಕುಮಾರಸ್ವಾಮಿ ಟ್ವೀಟ್

ಜಮೀರ್ ಅಹ್ಮದ್ ಆರೋಪಕ್ಕೆ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. “ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅವರ ಖರ್ಚು ವೆಚ್ಚಗಳಿಗೆ ಜೆಡಿಎಸ್‌ ಬಿಜೆಪಿಯಿಂದ ದುಡ್ಡು ತಂದಿತ್ತೇ?” ಎಂದು ಜಮೀರ್ ಹೆಸರು ಹೇಳದೇ ಪ್ರಶ್ನೆ ಮಾಡಿದ್ದಾರೆ.

ಜಮೀರ್‌ಗೆ ನೆನಪು ಮಾಡಿಕೊಟ್ಟರು

“ಜೆಡಿಎಸ್‌ ಪಕ್ಷ ಮತ್ತು ಇದರ ಕಾರ್ಯಕರ್ತರು ಎಲ್ಲರನ್ನೂ ಬೆಳೆಸಿದೆ. ಹೊರಗೆ ಹೋದವರನ್ನು ಹರಸಿದೆ. ಕೃತಜ್ಞತೆ ಇರಲಿ” ಎಂದು ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಕೇಳಿ

“2008ರ ಆಪರೇಷನ್‌ ಕಮಲದ ನಂತರ ನಡೆದ 20ಕ್ಕೂ ಹೆಚ್ಚು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಗೆಲ್ಲದೇ ಮುಖಭಂಗ ಅನುಭವಿಸಿತ್ತು” ಎಂದು ಕುಮಾರಸ್ವಾಮಿ ನೆನಪು ಮಾಡಿಕೊಟ್ಟಿದ್ದಾರೆ.

ಮತವಿಭಜನೆ ಹುನ್ನಾರ ಮಾಡುತ್ತಿದ್ದಾರೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, “ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40,000 ಅಲ್ಪಸಂಖ್ಯಾತ ಮತಗಳಿವೆ. ಜೆಡಿಎಸ್ ನವರು ಬಿಜೆಪಿ ಜೊತೆ ಒಳ‌ಒಪ್ಪಂದ ಮಾಡಿಕೊಂಡು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ನಮ್ಮ ಮತಗಳನ್ನು ವಿಭಜಿಸುವ ಹುನ್ನಾರ ಮಾಡುತ್ತಿದ್ದಾರೆ. ಇದನ್ನು ಕ್ಷೇತ್ರದ ಜನ ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದರು.

Posted in: Kannada News Posted by: admin On: