ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ; ಜಮೀರ್ ಟ್ವೀಟ್

Contacts:

Karnataka

oi-Gururaj S

|

Updated: Wednesday, March 31, 2021, 17:11 [IST]

ಬೆಂಗಳೂರು, ಮಾರ್ಚ್ 31; “2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಎಚ್. ಡಿ. ಕುಮಾರಸ್ವಾಮಿ, ಅಡ್ಜಸ್ಟ್‌ಮೆಂಟ್ ರಾಜಕೀಯದ ಮೂಲಕ ಇವತ್ತು ತುಂಬಿದ ಕೊಡವಾಗಿದ್ದಾರೆ. ಹಾಗಾಗಿ ದುಡ್ಡಿನ ವಿಚಾರ ಮಾತಾಡ್ತಾರೆ. ಹಿಂದೆ ಯಾರು ಯಾರಿಗೆ ಎಷ್ಟು ಸಹಾಯ ಮಾಡಿದ್ದಾರೆ? ಎಂದು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನೀವು ಸಿದ್ಧರಿದ್ದೀರಾ ಬ್ರದರ್?” ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಪ್ರಶ್ನಿಸಿದ್ದಾರೆ.

ಬುಧವಾರ ಜಮೀರ್ ಅಹಮದ್ ಖಾನ್ ಸರಣಿ ಟ್ವೀಟ್‌ಗಳನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಮಾಡಿದ್ದಾರೆ. ಬಸವಕಲ್ಯಾಣ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಕುರಿತು ಜಮೀರ್ ನೀಡಿದ್ದ ಹೇಳಿಕೆಗೆ ಎಚ್. ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದರು.

ಬಸವಕಲ್ಯಾಣ; 10 ಕೋಟಿ ಆರೋಪಕ್ಕೆ ಎಚ್‌ಡಿಕೆ ಟ್ವೀಟ್ ಬಾಣ!

ಇದಕ್ಕೆ ಪ್ರತಿಯಾಗಿ ಜಮೀರ್ ಅಹಮದ್ ಖಾನ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. “ಚಾಮರಾಜಪೇಟೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿ, ಗಲ್ಲಿಗಲ್ಲಿ ಸುತ್ತಿ ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದ್ದವರು ದೇವೇಗೌಡರು ಮತ್ತು ಸಿದ್ದರಾಮಯ್ಯನವರು. ಆಗ ಕುಮಾರಸ್ವಾಮಿ ಅಂದರೆ ಯಾರು ಅಂತಲೇ ಜನಕ್ಕೆ ಗೊತ್ತಿರಲಿಲ್ಲ. ನನ್ನ ಕ್ಷೇತ್ರದಲ್ಲಿ ಎಷ್ಟು ವಾರ್ಡ್‌ಗಳಿವೆ ಎಂದು ಈಗಲಾದರೂ ನಿಮಗೆ ಗೊತ್ತಾ? @hd_kumaraswamy ಬ್ರದರ್?” ಎಂದು ಟೀಕಿಸಿದ್ದಾರೆ.

ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಕಾಂಗ್ರೆಸ್ ಸೇರ್ಪಡೆ

ನೆನಪು ಮಾಡಿಕೊಳ್ಳಿ ಬದ್ರರ್

“ಜಮೀರ್ ಎಂದೂ ಕೊಟ್ಟ ಹಣಕ್ಕೆ ಲೆಕ್ಕ ಇಟ್ಟವನಲ್ಲ ಆದರೆ ಪಡ್ಕೊಂಡವರು ಮರೆಯಬಾರದಲ್ವಾ ಬ್ರದರ್ ! ಒಳ್ಳೆಯ ಮೂಡಿನಲ್ಲಿದ್ದಾಗ ನೆನಪು ಮಾಡಿಕೊಳ್ಳಿ ಬ್ರದರ್” ಎಂದು ಜಮೀರ್ ಅಹಮದ್ ಖಾನ್ ಟ್ವೀಟ್ ಮಾಡಿದ್ದಾರೆ.

ಎಷ್ಟು ಜನರನ್ನು ಗೆಲ್ಲಿಸಿದ್ದೀರಿ?

“ಜಾತ್ಯತೀತ ನಾಯಕರೇ, ಜಮೀರ್ ಅಹ್ಮದ್ ಜೆಡಿ(ಎಸ್) ಪಕ್ಷದಿಂದ ಹೊರ ಬಂದ ಮೇಲೆ ಎಷ್ಟು ಮುಸ್ಲಿಂ ನಾಯಕರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದೀರಿ?” ಎಂದು ಜಮೀರ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಯಾಕೆ ಟಿಕೆಟ್ ಕೊಟ್ಟಿಲ್ಲ ಬ್ರದರ್?

“ರಾಮನಗರದಲ್ಲೋ, ಮಂಡ್ಯದಲ್ಲೋ, ಹಾಸನದಲ್ಲೋ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಬ್ರದರ್?” ಎಂದು ಜಮೀರ್ ಅಹಮದ್ ಖಾನ್ ಪ್ರಶ್ನಿಸಿದ್ದಾರೆ.

ಚಾಮರಾಜಪೇಟೆ ಉಪ ಚುನಾವಣೆ

“ಚಾಮರಾಜಪೇಟೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿ, ಗಲ್ಲಿಗಲ್ಲಿ ಸುತ್ತಿ ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದ್ದವರು ದೇವೇಗೌಡರು ಮತ್ತು ಸಿದ್ದರಾಮಯ್ಯನವರು. ಆಗ ಕುಮಾರಸ್ವಾಮಿ ಅಂದರೆ ಯಾರು ಅಂತಲೇ ಜನಕ್ಕೆ ಗೊತ್ತಿರಲಿಲ್ಲ” ಎಂದು ಜಮೀರ್ ಟ್ವೀಟ್ ಮಾಡಿದ್ದಾರೆ.

Posted in: Kannada News Posted by: admin On: