ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ಏ.12ರೊಳಗೆ ಅರ್ಜಿ ಹಾಕಿ

Contacts:

Jobs

oi-Gururaj S

|

Updated: Wednesday, March 31, 2021, 14:03 [IST]

ದಾವಣಗೆರೆ, ಮಾರ್ಚ್ 31; ದಾವಣಗೆರೆ ಜಿಲ್ಲಾ ಪಂಚಾಯತಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು 12/4/2021 ಕೊನೆಯ ದಿನವಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕಾಗಿ ಹಲವು ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.

ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ಏ. 7ರೊಳಗೆ ಅರ್ಜಿ ಹಾಕಿ

ತಾಂತ್ರಿಕ ಸಹಾಯಕ (ಅರಣ್ಯ) 3, ತಾಂತ್ರಿಕ ಸಹಾಯಕ (ಕೃಷಿ) 4, ತಾಂತ್ರಿಕ ಸಹಾಯಕ (ತೋಟಗಾರಿಕೆ) 3, ತಾಂತ್ರಿಕ ಸಹಾಯಕ (ಸಿವಿಲ್) 4, ತಾಲೂಕು ಎಂ. ಐ. ಎಸ್. ಸಂಯೋಜಕರು 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವಿವಿಧ ಹುದ್ದೆಗೆ ಅರ್ಜಿ ಕರೆದ ಕೊಡಗು ಜಿಲ್ಲಾ ಪಂಚಾಯತಿ

ತಾಂತ್ರಿಕ ಸಹಾಯಕ (ಅರಣ್ಯ), ತಾಂತ್ರಿಕ ಸಹಾಯಕ (ಕೃಷಿ), ತಾಂತ್ರಿಕ ಸಹಾಯಕ (ತೋಟಗಾರಿಕೆ), ತಾಂತ್ರಿಕ ಸಹಾಯಕ (ಸಿವಿಲ್) ಹುದ್ದೆಗೆ ವೇತನ 24 ಸಾವಿರ ರೂ.ಗಳು ಮತ್ತು ಪ್ರಯಾಣ ಭತ್ಯೆ ಗರಿಷ್ಠ 1500 ರೂ.

ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; 402 ಹುದ್ದೆ

ತಾಲೂಕು ಎಂ. ಐ. ಎಸ್. ಸಂಯೋಜಕ ಹುದ್ದೆಗೆ 18,000 ರೂ. ವೇತನ ನಿಗದಿ ಮಾಡಲಾಗಿದೆ. ವಯೋಮಿತಿ 21 ರಿಂದ 45 ವರ್ಷಗಳು.

ಆಸಕ್ತರು davanagere.nic.in ವೆಬ್ ಸೈಟ್‌ನಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ 12/4/2021ರೊಳಗೆ ಜಿಲ್ಲಾ ಪಂಚಾಯಿತಿಯ ನರೇಗಾ ಶಾಖೆಗೆ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು.

ಹೆಚ್ಚಿನ ಮಾಹಿತಿಗಾಗಿ 18004252203 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

Posted in: Kannada News Posted by: admin On: