ಜೂನ್ 30ರವರೆಗೂ ಆಧಾರ್- ಪ್ಯಾನ್‌ ಜೋಡಣೆ ಗಡುವು ವಿಸ್ತರಣೆ

Contacts:

Business

oi-Sumalatha N

|

Updated: Wednesday, March 31, 2021, 21:14 [IST]

ನವದೆಹಲಿ, ಮಾರ್ಚ್ 31: ಆಧಾರ್ ಸಂಖ್ಯೆಯನ್ನು ಪ್ಯಾನ್‌ ಕಾರ್ಡ್ ಜೊತೆ ಜೋಡಣೆ ಮಾಡುವ ಗಡುವನ್ನು ಆದಾಯ ತೆರಿಗೆ ಇಲಾಖೆ ಜೂನ್ 30ರವರೆಗೂ ವಿಸ್ತರಿಸಿದೆ. ಈ ಹಿಂದೆ ಆಧಾರ್ ಸಂಖ್ಯೆ ಜೋಡಣೆಗೆ ಮಾರ್ಚ್‌ 31ರವರೆಗೂ ಗಡುವು ನೀಡಲಾಗಿತ್ತು. ಇದೀಗ ಮೂರು ತಿಂಗಳ ಕಾಲ ಗಡುವನ್ನು ವಿಸ್ತರಿಸಿದೆ.

ಕೊರೊನಾ ಸೋಂಕಿನ ಕಾರಣವಾಗಿ ಈ ಅವಧಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಜೂನ್ 30ರ ಒಳಗೆ ಯಾವುದೇ ವ್ಯಕ್ತಿ ಆಧಾರ್ ಜೊತೆ ಪ್ಯಾನ್‌ ಕಾರ್ಡ್‌ ಲಿಂಕ್ ಮಾಡಲು ವಿಫಲವಾದರೆ ಪ್ಯಾನ್‌ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. 1000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಸರ್ವರ್ ಸಮಸ್ಯೆ: ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ದಿನಾಂಕ ವಿಸ್ತರಿಸಲು ಪಟ್ಟು

ಬುಧವಾರ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಕೊನೆಯ ದಿನವಾಗಿದ್ದು, ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್ ಜೋಡಣೆ ದಿನಾಂಕವನ್ನು ವಿಸ್ತರಿಸುವಂತೆ ಆಗ್ರಹಿಸಲಾಗಿತ್ತು.

ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ನಲ್ಲೇ ಈ ರೀತಿ ತಾಂತ್ರಿಕ ದೋಷ ಕಂಡು ಬರುತ್ತಿದೆ. ಇದರಿಂದಾಗಿ ಹಲವರು ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರಿಗೆ ವೆಬ್​ಸೈಟ್​ ತೆರೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆನ್‌ಲೈನ್‌ನಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲಾಗದ ಹಿನ್ನೆಲೆ ಕೆಲವರು ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ ನಿರ್ವಹಣೆ ಬಗ್ಗೆ ಕಿಡಿ ಕಾರಿದ್ದರು. ಇದೀಗ ಮೂರು ತಿಂಗಳ ಕಾಲ ಗಡುವನ್ನು ವಿಸ್ತರಿಸಿದೆ.

Posted in: Kannada News Posted by: admin On: