ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ ಬಳಿಕ ಅಜ್ಞಾತವಾಸಕ್ಕೆ ರಮೇಶ್ ಜಾರಕಿಹೊಳಿ ?

Contacts:

Bengaluru

oi-Muralidhara V

|

Published: Wednesday, March 31, 2021, 13:23 [IST]

ಬೆಂಗಳೂರು, ಮಾರ್ಚ್‌ 31 : ಸಂತ್ರಸ್ತ ಸಿಡಿಲೇಡಿ ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸುತ್ತಿದ್ದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬಂಧನದ ಭೀತಿ ಎದುರಾಗಿತ್ತು. ಸಿಡಿ ಲೇಡಿ ಅಖಾಡಕ್ಕೆ ಇಳಿಯುತ್ತಿದ್ದಂತೆ ಕೊಲ್ಲಾಪುರ ಮಹಾಲಕ್ಷ್ಮಿ ಮೊರೆ ಹೋಗಿದ್ದ ಶಾಸಕ ರಮೇಶ್ ಜಾರಕಿಹೊಳಿ

ಅಜ್ಞಾತ ಸ್ಥಳಕ್ಕೆ ತೆರಳಿದರೇ ? ಸಿಡಿ ಸ್ಪೋಡಿಸಿ ನಿಗೂಢ ರೀತಿ ಕಣ್ಮರೆಯಾಗಿದ್ದ ಸಿಡಿಲೇಡಿ ಮಾದರಿಯಲ್ಲಿಯೇ ರಹಸ್ಯ ಜಾಗ ಸೇರಿ ಕೊಂಡರೇ ? ಹೀಗೊಂದು ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ನಿರೀಕ್ಷಣಾ ಜಮೀನು ಕೋರಿ ಕೋರ್ಟ್ ಮೊರೆ ಹೋಗುವ ಬಗ್ಗೆ ತೀರ್ಮಾನಿಸಿದ್ದು, ಬಂಧನದಆ ಬೀತಿ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ಸಂತ್ರಸ್ತ ಯುವತಿ ನಿನ್ನೆಯಷ್ಟೇ ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಿದ್ದಳು. ಸಂತ್ರಸ್ತ ಯುವತಿ ಅಖಾಡಕ್ಕೆ ಇಳಿದ ಬಳಿಕ ಮಾಧ್ಯಮಗಳಿಗೆ ಸಿಗದ ರಮೇಶ್ ಜಾರಕಿಹೊಳಿ ಕೊಲ್ಲೂರು ಮುಕಾಂಬಿಕೆ ದರ್ಶನಕ್ಕೆ ತೆರಳಿದ್ದರು. ದೇವಿ ದರ್ಶನ ಬಳಿಕ ಬೆಳಗಾವಿಗೆ ಹೋಗಿದ್ದ ರಮೇಶ್ ಜಾರಕಿಹೊಳಿ ಗೋಕಾಕ್‌ಗೆ ತೆರಳಬೇಕಿತ್ತು. ಬೆಳಗಾವಿಯ ಲೋಕಸಭಾ ಕ್ಷೇತ್ರದ ಚುಣಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು.

ಸಿಡಿ ಹೊರ ಬಿದ್ದ ಬಳಿಕ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ, ಹೇಳಿಕೆ ನೀಡದಂತೆ ಅಂತರ ಕಾಯ್ದುಕೊಳ್ಳಲು ವರಿಷ್ಠರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಉಪ ಚುನಾವಣೆ, ಪ್ರಚಾರ ಸಭೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಸಿಡಿ ಲೇಡಿ ಇಟ್ಟ ಹೆಜ್ಜೆಯಿಂದ ಅತ್ಯಾಚಾರ ಆರೋಪ ಪ್ರಕರಣದ ಬಿಗಿಯಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಮತ್ತೆ ಅಜ್ಞಾತ ವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಅವರು ಅಜ್ಞಾತ ವಾಸಕ್ಕೆ ತೆರಳಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ನೀಡಿದ ಜಾರಕಿಹೊಳಿ ವಿಶೇಷ ಕರ್ತವ್ಯ ಅಧಿಕಾರಿ ರುದ್ರಯ್ಯ, ಮುಕಾಂಬಿಕೆ ದರ್ಶನ ಪಡೆದು ಅವರು ಗೋಕಾಕ್ ತೆರಳಿದರು. ಆ ಬಳಿಕ ಸಂಪರ್ಕ ಮಾಡಿಲ್ಲ. ನಾನೂ ಕರೆ ಮಾಡಿಲ್ಲ. ಅವರು ಗೋಕಾಕ್‌ನಲ್ಲೇ ಇರಬಹುದೇನೋ ಎಂದು ಉತ್ತರ ನೀಡಿದರು. ಇನ್ನು ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಿದ ಬಳಿಕ ಬಂಧನದ ಭೀತಿ ಎದುರಾಗಿ ಕರ್ನಾಟಕ ರಾಜ್ಯವನ್ನು ಬಿಟ್ಟು ರಮೇಶ ಜಾರಕಿಹೊಳಿ ಹೊರ ರಾಜ್ಯಕ್ಕೆ ತೆರಳಿದ್ದಾರೆ. ಜಾರಕಿಹೊಳಿ ಅವರ ವಿಶೇಷ ಕರ್ತವ್ಯ ಅಧಿಕಾರಿಯೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎಂಬ ಸುದ್ದಿ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ.

ಸಿಡಿ ಸಂತ್ರಸ್ತ ಯುವತಿ ಸ್ವ ಇಚ್ಛೆ ಹೇಳಿಕೆ ದಾಖಲಿಸಿದ ಬಳಿಕ ರಮೇಶ್ ಜಾರಕಿಹೊಳಿ ಅಂತರ ಕಾಯ್ದುಕೊಂಡಿರುವುದು ನಿಜ. ಸಿಡಿ ಲೇಡಿ ವಿಡಿಯೋಗಳಿಗೆ ಪ್ರತಿಯಾಗಿ ಅಡಿಯೋ ಅಸ್ತ್ರಗಳನ್ನು ಪ್ರಯೋಗಿಸಿದ್ದ ರಮೇಶ್ ಜಾರಕಿಹೊಳಿ ಇದೀಗ ಮುಂದೆ ಯಾವ ಹೆಜ್ಜೆ ಇಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ರಮೇಶ್ ಜಾರಕಿಹೊಳಿ ಅತ್ಯಾಚಾರ ಆರೋಪ ಹೊತ್ತಿದ್ದು, ಕೂಡಲೇ ಬಂಧಿಸಬೇಕೆಂದು ಸಿಡಿಲೇಡಿ ಪರ ವಕೀಲರು ಆಗ್ರಹಿಸಿದ್ದಾರೆ.

Posted in: Kannada News Posted by: admin On: