ಕೊರೊನಾ ಸೋಂಕು ಹೆಚ್ಚಳ: ವರ್ಕ್ ಫ್ರಂ ಹೋಂ ಮತ್ತೆ 3 ತಿಂಗಳು ವಿಸ್ತರಣೆ

Contacts:

Bengaluru

oi-Nayana Bj

|

Updated: Wednesday, March 31, 2021, 14:17 [IST]

ಬೆಂಗಳೂರು, ಮಾರ್ಚ್ 31: ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿರುವ ಕಾರಣ, ಐಟಿ ಕಂಪನಿಗಳು ಮುಂದಿನ 3 ತಿಂಗಳುಗಳ ಕಾಲ ವರ್ಕ್ ಫ್ರಂ ಹೋಂ ವಿಸ್ತರಿಸುತ್ತಿವೆ.

ಮಾರ್ಚ್ 31ರವರೆಗೆ ವರ್ಕ್ ಫ್ರಂ ಹೋಂ ಇರುತ್ತದೆ ಎಂದು ಈ ಮೊದಲೇ ಕಂಪನಿಗಳು ತಿಳಿಸಿದ್ದವು. ಗುರುವಾರದಿಂದ ಎಲ್ಲರಿಗೂ ಕೆಲಸಕ್ಕೆ ಮರಳುವಂತೆ ಕೇಳಿಕೊಳ್ಳಲಾಗಿತ್ತು.

ಬಜೆಟ್ 2021: ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಆದಾಯ ತೆರಿಗೆ ಕಡಿತ?

ಆದರೆ ಎಲ್ಲರೂ ಇ-ಮೇಲ್ ಕಳುಹಿಸುತ್ತಿದ್ದಾರೆ, ಅಗತ್ಯವಿಲ್ಲದಿದ್ದರೆ ಕಚೇರಿಗೆ ಬರುವುದಿಲ್ಲ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಇನ್ನು ಕೆಲವು ಕಂಪನಿಗಳಲ್ಲಿ ಸಿಬ್ಬಂದಿಗೆ ಸಧ್ಯಕ್ಕೆ ಕಂಪನಿಗೆ ಬರದಂತೆ ತಡೆಯುತ್ತಿದ್ದಾರೆ.

ಸರ್ಕಾರಿ ಕಚೇರಿಗಳಿಗೆ ನೀಡುವ ಜನರ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲದ ಕಾರಣ ಹೆಚ್ಚಿನ ಅಪಾಯವಿದೆ. ಹಾಗಾಗಿ ರಾಜ್ಯ ಸರ್ಕಾರಿ ನೌಕರರು ಕೂಡ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಕೇಳುತ್ತಿದ್ದಾರೆ.

ಮಾರ್ಚ್ 31ರವರೆಗೆ ಐಟಿ ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ವಿಸ್ತರಿಸಲಾಗಿತ್ತು. ಆದರೆ ಸೋಮವಾರ ವರ್ಕ್ ಫ್ರಂ ಹೋಂ 3 ತಿಂಗಳುಗಳ ಕಾಲ ವಿಸ್ತರಿಸಿರುವುದಾಗಿ ಇ-ಮೇಲ್ ಬಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಕ್ಲಸ್ಟರ್ ಮಾದರಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಕ್ಲಸ್ಟರ್ ಮಾದರಿ ಸೋಂಕು ಸಂಖ್ಯೆ 31ಕ್ಕೆ ಏರಿಕೆಯಾಗಿದ್ದು, ದಾಸರಹಳ್ಳಿ ಹಾಗೂ ಯಲಹಂಕ ಎರಡೂ ಕ್ಷೇತ್ರಗಳಲ್ಲಿ ತಲಾ 9 ಕ್ಲಸ್ಟರ್ ಪ್ರಕರಣಗಳು ಪತ್ತೆಯಾಗಿವೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ನಗರದಲ್ಲಿ ಮೊದಲ ಕ್ಲಸ್ಟರ್ ಝೋನ್ ಪತ್ತೆಯಾಗಿತ್ತು. ಇದಾದ ಬಳಿಕ ರಾಜ್ಯದಲ್ಲಿ ಈ ವರೆಗೂ 52 ಕ್ಲಸ್ಟರ್ ಜೋನ್ ಗಳು ಪತ್ತೆಯಾಗಿವೆ. ದಾಸರಹಳ್ಳಿ ಹಾಗೂ ಯಲಹಂಕದಲ್ಲಿ ತಲಾ 9 ಕ್ಲಸ್ಟರ್ ಝೋನ್ ಗಳು ಪತ್ತೆಯಾಗಿದ್ದು, ರಾಜರಾಜೇಶ್ವರಿ ನಗರದಲ್ಲಿಯೂ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

ಬಹುತೇಕ ಕ್ಲಸ್ಟರ್ ಪ್ರಕರಣಗಳು ಕಾಂಪ್ಲೆಕ್ಸ್, ಶಾಲೆ ಹಾಗೂ ಕಾಲೇಜುಗಳಲ್ಲಿಯೇ ಪತ್ತೆಯಾಗಿವೆ ಎಂದು ಜಂಟಿ ಆಯುಕ್ತ ನರಸಿಂಹ ಮೂರ್ತಿಯವರು ಹೇಳಿದ್ದಾರೆ. ಶಾಲೆ, ಕಾಲೇಜು ಹಾಗೂ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಗಳಲ್ಲಿ ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಕ್ಲಸ್ಟರ್ ಪ್ರಕರಣಗಳು ಪತ್ತೆಯಾಗುತ್ತಿವೆ.

Posted in: Kannada News Posted by: admin On: